Surprise Me!

ಕಿರುತೆರೆ ನಟಿ ನಯನಾ ಸೀಮಂತ | Satyam Shivam Sundaram Fame Nayana's Baby Shower Photos

2021-07-06 3 Dailymotion

ಕಿರುತೆರೆ ನಟಿ ನಯನಾ ಸೀಮಂತ | Satyam Shivam Sundaram Fame Nayana's Baby Shower Photos

ಇತ್ತೀಚೆಗೆಷ್ಟೆ ‘ಸತ್ಯಂ ಶಿವಂ ಸುಂದರಂ’ ಧಾರಾವಾಹಿ ಖ್ಯಾತಿಯ ನಟಿ ನಯನಾ ಕೆ.ಎಂ ಗರ್ಭಿಣಿ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಇದೀಗ ನಯನಾ ಅವರಿಗೆ ಸೀಮಂತವನ್ನು ಮಾಡಲಾಗಿದೆ. ನಟಿ ನಯನಾ ಅವರಿಗೆ ಮನೆಯಲ್ಲಿಯೇ ಸಿಂಪಲ್ ಆಗಿ ಸೀಮಂತ ಕಾರ್ಯಕ್ರಮವನ್ನು ಮಾಡಲಾಗಿದ್ದು, ಸಂಬಂಧಿಕರು, ಆಪ್ತ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು.

ನಯನಾ ಗುಲಾಬಿ ಬಣ್ಣದ ಸೀರೆಯಿಟ್ಟು ಸಖತ್ ಮಿಂಚಿದ್ದಾರೆ. ನಯನಾಗಾಗಿ ಅನೇಕ ಸಿಹಿ ತಿಂಡಿಗಳನ್ನು ಮಾಡಿದ್ದು, ಸಾಂಪ್ರದಾಯಕವಾಗಿ ಸೀಮಂತ ಕಾರ್ಯಕ್ರಮವನ್ನು ಮಾಡಿದ್ದಾರೆ. ಸೀಮಂತ ಕಾರ್ಯಕ್ರಮ ಮುಗಿದ ಬಳಿ ಪತಿ, ಸಂಬಂಧಿಕರ ಜೊತೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದು, ಆ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ನಟಿ ನಯನಾ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಸತ್ಯಂ ಶಿವಂ ಸುಂದರಂ’ ಧಾರಾವಾಹಿಯಲ್ಲಿ ತಾಪ್ಸಿ ಪಾತ್ರದ ಮೂಲಕ ಎಲ್ಲರಿಗೂ ಪರಿಚಯರಾಗಿದ್ದಾರೆ. ಕೆಲವು ದಿನಗಳ ಹಿಂದೆ ನಟನೆಯಿಂದ ಬ್ರೇಕ್ ತೆಗೆದುಕೊಂಡು ಮನೆಯಲ್ಲಿದ್ದಾರೆ.

ನಯನಾ ಸ್ನಾತಕೋತ್ತರ ಪದವಿ ಮಾಡಿದ್ದು, ನಂತರ ಎರಡು ವರ್ಷ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ. ನಟನಾ ಕ್ಷೇತ್ರಕ್ಕೆ ನಯನಾ ಅಕಸ್ಮಾತ್ ಆಗಿ ಎಂಟ್ರಿ ಕೊಟ್ಟಿದ್ದು, ಕಿರುತೆರೆಯಲ್ಲೇ ಸಾಕಷ್ಟು ಖ್ಯಾತಿ ಪಡೆದುಕೊಂಡಿದ್ದಾರೆ. ಸದ್ಯಕ್ಕೆ ನಯನಾ ಎಂಟು ತಿಂಗಳ ಗರ್ಭಿಣಿಯಾಗಿದ್ದು, ತಮ್ಮ ಮೊದಲ ಮಗು ಬರುವಿಕೆಗಾಗಿ ಕಾಯುತ್ತಿದ್ದಾರೆ.

For latest updates on film news subscribe our channel.

Subscribe on YouTube: www.youtube.com/publicmusictv
Like us @ https://www.facebook.com/publicmusictv
Follow us @ https://twitter.com/publicmusictv

Buy Now on CodeCanyon